ಇದು ಕೇವಲ ಮನೆ ಅಲ್ಲ – ಕನ್ನಡದ ಆತ್ಮವೇ ಮಾತನಾಡುತ್ತೆ ಅನ್ನಿಸುತ್ತದೆ
Kuppali Venkatappa Puttappa (ಕುವೆಂಪು) ಕನ್ನಡದ ಜ್ಞಾನಪೀಠ ಪ್ರಶಸ್ತಿ ವಿಜೇತ ಮಹಾನ್ ಕವಿ. ಅವರ ಜನ್ಮಸ್ಥಳ ಕುಪ್ಪಳ್ಳಿ. ಇದು ತೀರ್ಥಹಳ್ಳಿಗೆ ತುಂಬಾ ಹತ್ತಿರ. ಕುಪ್ಪಳ್ಳಿya ಹಸಿರು ಪರಿಸರ, ಮಲೆನಾಡಿನ ಪ್ರಕೃತಿ, ನದಿ-ಮಳೆ ಇವುಗಳು ಕುವೆಂಪು ಅವರ ಸಾಹಿತ್ಯಕ್ಕೆ ದೊಡ್ಡ ಪ್ರೇರಣೆಯಾಯಿತು.
ಅವರ ಕೃತಿಗಳಲ್ಲಿ ಪ್ರಕೃತಿ, ಮಾನವೀಯತೆ ಮತ್ತು ವಿಶ್ವಮಾನವ ತತ್ವಗಳು ಸ್ಪಷ್ಟವಾಗಿ ಕಾಣುತ್ತವೆ. “ವಿಶ್ವಮಾನವ ಸಂದೇಶ” ಎಂಬ ಆಲೋಚನೆ ಕೂಡ ಈ ನೈಸರ್ಗಿಕ ವಾತಾವರಣದಿಂದಲೇ ಬಂದದ್ದು ಎಂದು ಹೇಳಲಾಗುತ್ತದೆ.
ಶಿವಮೊಗ್ಗ ಜಿಲ್ಲೆಯ ತೀರ್ಥಹಳ್ಳಿ ತಾಲ್ಲೂಕಿನ ಕುಪ್ಪಳ್ಳಿ ಎಂಬ ಸಣ್ಣ ಹಳ್ಳಿಯಲ್ಲೇ, ರಾಷ್ಟ್ರಕವಿ ಕುವೆಂಪು ಅವರ ಬಾಲ್ಯ ಕಳೆಯಿತು. ಇದೇ ಅವರ ಮನೆ, ಇಂದು ಕವಿಮನೆ ಎಂಬ ಸ್ಮಾರಕವಾಗಿ ಉಳಿದುಕೊಂಡಿದೆ. ಮಲೆನಾಡಿನ ಹಸಿರು ಬೆಟ್ಟಗಳು, ಮೌನ ಮತ್ತು ಪ್ರಕೃತಿಯ ನಡುವೆ ಬೆಳೆದ ಕುವೆಂಪು ಅವರ ಚಿಂತನೆಗಳು ಮುಂದೆ ಕನ್ನಡ ಸಾಹಿತ್ಯದ ದಿಕ್ಕೇ ಬದಲಿಸಿದವು. ಕವಿಮನೆಗೆ ಹೋದ್ರೆ, ಕೇವಲ ಮನೆ ಅಲ್ಲ – ಕನ್ನಡದ ಆತ್ಮವೇ ಮಾತನಾಡುತ್ತೆ ಅನ್ನಿಸ್ತು.
ಕವಿಮನೆಯಿಂದ ಸ್ವಲ್ಪ ದೂರದಲ್ಲೇ ಇರುವ ಕವಿಶೈಲ, ಕುವೆಂಪು ಅವರ ಅಂತಿಮ ವಿಶ್ರಾಂತಿ ಸ್ಥಳ. ಬೆಟ್ಟದ ಮೇಲೆ ನಿಂತ ಕಲ್ಲುಗಳು, ಕೆಳಗೆ ಹರಡುವ ಮಲೆನಾಡಿನ ನೋಟ – ಇಲ್ಲಿ ನಿಂತರೆ, ಜೀವನವೇ ಒಂದು ಕವನ ಅನ್ನಿಸ್ತು.
ಕವಿಮನೆಯಿಂದ ಸ್ವಲ್ಪ ದೂರದಲ್ಲೇ ಇರುವ ಕವಿಶೈಲ, ಕುವೆಂಪು ಅವರ ಅಂತಿಮ ವಿಶ್ರಾಂತಿ ಸ್ಥಳ. ಬೆಟ್ಟದ ಮೇಲೆ ನಿಂತ ಕಲ್ಲುಗಳು, ಕೆಳಗೆ ಹರಡುವ ಮಲೆನಾಡಿನ ನೋಟ – ಇಲ್ಲಿ ನಿಂತರೆ, ಜೀವನವೇ ಒಂದು ಕವನ ಅನ್ನಿಸ್ತು. ಕವಿಮನೆ ಮತ್ತು ಕವಿಶೈಲ ಎರಡೂ ಸೇರಿ, ಮನಸ್ಸಿಗೆ ಅಪರೂಪದ ಶಾಂತಿ ಕೊಡುತ್ತವೆ.
Kuvempur ravara Kavikriti parichaya
ವಿದ್ಯಾರ್ಥಿಗಳು, ಲೇಖಕರು, ಪ್ರವಾಸಿಗರು – ಎಲ್ಲರೂ ಇಲ್ಲಿ ಬಂದು ಕವಿಮನೆ ನೋಡಿದ್ರೆ, ಕನ್ನಡದ ಮೇಲಿನ ಗೌರವ ಇನ್ನಷ್ಟು ಗಟ್ಟಿಯಾಗುತ್ತೆ. ಒಮ್ಮೆ ಕುಪ್ಪಳ್ಳಿಗೆ ಹೋಗಿ… ಕನ್ನಡವನ್ನು ಇನ್ನಷ್ಟು ಪ್ರೀತಿಸೋದು ಖಚಿತ.
ತೀರ್ಥಹಳ್ಳಿಯ ಹತ್ತಿರ ನೋಡಲು ಕೆಲವು ಸುಂದರ ಸ್ಥಳಗಳು ಇವೆ:
- Agumbe – ಪಶ್ಚಿಮ ಘಟ್ಟಗಳ ಅದ್ಭುತ ಸೂರ್ಯಾಸ್ತದ ದೃಶ್ಯಕ್ಕೆ ಪ್ರಸಿದ್ಧವಾದ ಸ್ಥಳ.
- Kundadri Hills – ಜೈನ ಮಂದಿರ ಮತ್ತು ಮೋಡಗಳ ನಡುವೆ ಇರುವ ಬೆಟ್ಟದ ಮೇಲಿನ ಸುಂದರ ವೀಕ್ಷಣಾ ಸ್ಥಳ.
- Sirimane Falls – ಹಸಿರು ಕಾಡಿನ ಮಧ್ಯೆ ಹರಿಯುವ ಸುಂದರ ಜಲಪಾತ.
- Mandagadde Bird Sanctuary – ವಿವಿಧ ಪಕ್ಷಿಗಳನ್ನು ಸಮೀಪದಿಂದ ನೋಡುವ ಶಾಂತ ಸ್ಥಳ.
- Kuppalli – ಕುವೆಂಪು ಅವರ ಜನ್ಮಸ್ಥಳ, ಸಾಹಿತ್ಯ ಪ್ರಿಯರಿಗೆ ವಿಶೇಷ ಆಕರ್ಷಣೆ.







0 Comments
If you have any doubts let me know